ಮಹಾರಾಷ್ಟ್ರ ಮಳೆ ಎಫೆಕ್ಟ್ ಹಿನ್ನಲೆ ಭೀಮಾನದಿ ಪ್ರವಾಹ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಲಾಕ್ ಆಗಿದ್ದಾರೆ. ನೀರಿನಲ್ಲೇ ವಾಹನ ಕೆಟ್ಟು ಸಮಸ್ಯೆ ಅನುಭವಿಸಿದ್ದಾರೆ. ಜಿಲ್ಲೆಯ ಇಂಡಿ ಪಟ್ಟಣದಿಂದ ಭೀಮಾನದಿ ಪಾತ್ರಕ್ಕೆ ತೆರಳುತ್ತಿದ್ದ ಅಧಿಕಾರಿಗಳಿಗೆ ಸಮಸ್ಯೆಯಾಗಿದೆ. ಪ್ರವಾಹದಿಂದ ಅಧಿಕ ನೀರು ಬಂದಿದ್ದ ರಸ್ತೆಯಲ್ಲೇ ಸಂಚಾರ ಮಾಡುವಾಗ ವಾಹನ ಕೈಕೊಟ್ಟಿದೆ. ಕೊನೆಗೆ ನೀರಿನಲ್ಲೇ ನಡೆದು ಹೋಗಿದ್ದಾರೆ