ಶಿರಸಿ : ತಾಲೂಕಿನ ಯಲ್ಲಾಪುರ ರಸ್ತೆಯ ಬೈರುಂಬೆ ಹತ್ತಿರ ಬೃಹತ್ ಗಾತ್ರದ ಮತವೊಂದು ರಸ್ತೆಗುರುಳಿದ ಘಟನೆ ಗುರುವಾರ ಬೆಳಿಗ್ಗೆ 8 ಗಂಟೆ ಸಮಾರಿಗೆ ನಡೆದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಮರ ಬಿದ್ದ ಪರಿಣಾಮವಾಗಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ತಕ್ಷಣವೇ ಸ್ಥಳೀಯರು ಹಾಗೂ ಹೆಸ್ಕಾಂ ಸಿಬ್ಬಂಧಿಗಳು ಬಿದ್ದ ಮರವನ್ನು ತೆರವುಗೊಳಿಸುವ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.