ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಪೊಲೀಸ್ ಠಾಣೆ ಮುಂದೆ ಸೋಮವಾರ ಮಧ್ಯಾನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಜೊಗಂಡಬಾವಿ ಗ್ರಾಮದಲ್ಲಿ ಚೆನ್ನಪ್ಪ ಎನ್ನುವ ರೈತ ತನ್ನ ಜಮೀನಿನಲ್ಲಿ ಕೃಷಿ ಹೊಂಡ ತೋಡಿಸಿದ್ದ, ಏಪ್ರಿಲ್ 23 ರಂದು ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ ನಾಲ್ಕು ಜನ ಯುವಕರಲ್ಲಿ ಜಗದೀಶ ಇಂಗಳಗಿ ಎನ್ನುವ ಯುವಕ ಸಾವನಪ್ಪಿದ್ದಾನೆ, ಆದರೆ ಕೃಷಿ ಹೊಂಡ ತೋಡಿಸಿರುವ ರೈತ ಚನ್ನಪ್ಪನ ಮೇಲೆ ಮೃತ ಯುವಕನ ಕುಟುಂಬದವರು ದಬ್ಬಾಳಿಕೆ ನಡೆಸುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.