ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ 1, ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿ ಬಿಡಲಾಗಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಜನತೆಗೆ ನೆರೆ ಭೀತಿ ಉಂಟಾಗಿದೆ. ಬಸವಸಾಗರ ಜಲಾಶಯ ಈಗಾಗಲೇ ಭರ್ತಿಯಾಗಿದ್ದು ಕಳೆದ ಹಲವು ದಿನಗಳಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದ ಕೃಷ್ಣಾ ನದಿಗೆ ಬಾರಿ ಪ್ರಮಾಣದ ನೀರು ಬಿಡಲಾಗಿದ್ದು ನದಿ ದಡಕ್ಕೆ ಯಾರು ತೆರಳದಂತೆ ಅಣೆಕಟ್ಟು ಅಧಿಕಾರಿಗಳಿಂದ ಎಚ್ಚರಿಕೆ ನೀಡಲಾಗಿದೆ