ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ ಮೈದುಂಬಿ ಹರಿಯುತ್ತಿರುವ ಗೋಕಾಕ್ ಜಲಪಾತ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಘಟಪ್ರಭಾ ಜಲಾಶಯ ಹಾಗೂ ಹಿರಣ್ಯಕೇಶಿ ನದಿಯಲ್ಲಿ ಅಪಾರ ನೀರಿನ ಹರಿವು ಹೆಚ್ಚಳವಾದ ಹಿನ್ನಲೆ ಇಂದು ಶುಕ್ರವಾರ 9 ಗಂಟೆಗೆ ಗೋಕಾಕ್ ಜಲಪಾತಕ್ಕೆ ಮತ್ತೊಮ್ಮೆ ಜೀವಕಳೆ ಬಂದಂತಾಗಿದೆ ಮೈದುಂಬಿ ಹರಿಯುತ್ತಿರುವ ಗೋಕಾಕ್ ಜಲಪಾತ ಭಾರತದ ನಯಾಗರ ಫಾಲ್ಸ್ ಎಂದೇ ಬಿಂಬಿತವಾಗಿರುವ ಗೋಕಾಕ್ ಜಲಪಾತ 171 ಅಡಿ ಮೇಲಿಂದ ಧುಮ್ಮುಕ್ಕುವ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬವಾಗಿದೆ ನಯನಮನೋಹರ ದೃಶ್ಯ ನೋಡಲು ಫಾಲ್ಸ್‌ನತ್ತ ಪ್ರವಾಸಿಗರ ದಂಡು ಹರಿದು ಬರತ್ತಾ ಇದೆ.