ಸುರಪುರ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಕರ್ನಾಟಕ ಸೂರ್ಯನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೆಯ ದಿನವಾದ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 3 ಉಪನ್ಯಾಸ ಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಜನ ಸಾಹಿತಿಗಳು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಉಪನ್ಯಾಸವನ್ನು ಮಂಡಿಸಿದರು.ಸಮರೂಪ ಸಮಾರಂಭದಲ್ಲಿ ಡಾ.ಲಕ್ಷ್ಮಣ್ ತೆಲಗಾವಿ,ಡಾ ವೀರಶೆಟ್ಟಿ,ರಾಜಾ ಕೃಷ್ಣಪ್ಪ ನಾಯಕ ಸೇರಿ ಅನೇಕರು ಭಾಗವಹಿಸಿದ್ದರು.