ಕರ್ನಾಟಕ ರಾಜ್ಯ ಸರ್ಕಾರ ಆದೇಶದ ಹಿನ್ನೆಲೆ ಆಗಸ್ಟ್.23 ರಿಂದ ಸೆಪ್ಟೆಂಬರ್ 12ರ ವರೆಗೆ ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರಿಂದ ನೋಟಿಸ್ ಪಡೆದು ದಂಡ ಪಾವತಿಸದೆ ಇರುವ ಸಾರ್ವಜನಿಕರು ದಂಡ ಕಟ್ಟಲು ರಿಯಾಯಿತಿಯನ್ನು ನೀಡಲಾಗಿದೆ. ಶೇಕಡ 50ರಷ್ಟು ದಂಡ ಪಾವತಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ನೋಟಿಸ್ ನೀಡಿದರು ಸಹ ದಂಡ ಪಾವತಿಸದೆ ಇರುವ ಸಾರ್ವಜನಿಕರು ಹತ್ತಿರದ ಸಂಚಾರಿ ಠಾಣೆಯಲ್ಲಿ ದಂಡ ಪಾವತಿಸುವಂತೆ ಶಿವಮೊಗ್ಗ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ಅವರು ಮಂಗಳವಾರ ತಿಳಿಸಿದರು.