ರೈತರ ನೆರವಿಗೆ ಬಾರದ ತಾಲ್ಲೂಕು ಆಡಳಿತ, ಕಚೇರಿಗೆ ಬೀಗ ಜಡಿದ ರೈತರು ಸುಮಾರು ವರ್ಷವಾದ್ರೂ ರೈತರ ನೆರವಿಗೆ ತಾಲ್ಲೂಕು ಆಡಳಿತ ಬಾರದೆ ಅವರ ಸಂಕಷ್ಟಗಳಿಗೆ ಸ್ಪಂದಿಸದೆ ಉಳ್ಳವರ ಕೊಂಬು ಕಾಯುತ್ತಿದ್ದಾರೆ ಎಂದು ರೈತ ಸಂಘಗಳು ಆರೋಪಿಸಿ ಶ್ರೀನಿವಾಸಪುರ ತಾಲ್ಲೂಕು ಕಚೇರಿಗೆ ಬೀಗ ಜಡಿದು ತೀವ್ರವಾಗಿ ಪ್ರತಿಭಟಿಸಿದರು. ಸರ್ಕಾರ ಈಗಾಗಲೇ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬಲಾಡ್ಯರು ಕೆರೆಗಳನ್ನು ಒತ್ತುವರಿ ಮಾಡಿಕೊಂಡು 19 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡೆದಿರುವ ಬಗ್ಗೆ ಸುಮಾರು 1 ವರ್ಷದಿಂದ ಸಾ