ಕಾರವಾರ ನಗರದ ನಗರಸಭೆ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 3 ರವರೆಗೆ ಸಾಮಾನ್ಯ ಸಭೆ ನಡೆಯಿತು. ನಗರದ ವಿವಿಧ ವಾರ್ಡ್ ಗಳ ಸಮಸ್ಯೆಗಳ ಬಗ್ಗೆ, ಅಧ್ಯಕ್ಷ ರವಿರಾಜ್ ಅಂಕೋಲೇಕರ್ ನೇತೃತ್ವದಲ್ಲಿ ನಡೆಯಿತು. ನಗರ ವ್ಯಾಪ್ತಿಯ ನಗರಸಭೆ ಅಧೀನದಲ್ಲಿ ಇರುವ ಮಳಿಗೆಗಳು ಖಾಲಿ ಇದ್ದು ಅವುಗಳನ್ನು ಮರು ಟೆಂಡರ್ ಕರೆಯುವಂತೆ ಸದಸ್ಯರು ಒತ್ತಾಯ ಮಾಡಿದರು. ಸಭೆಯಲ್ಲಿ ಪೌರಾಯಕ್ತ ಜಗದೀಶ ಹಲಿಗೆಜ್ಜಿ ಹಾಗೂ ಇನ್ನಿತರರು ಇದ್ದರು.