ಶಿರಸಿ ನಗರದ ಪಂಡಿತ್ ದಿನ್ ದಯಾಳ್ ಭವನದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಗಾರ ಸಭೆ ಮಂಗಳವಾರ ಸಂಜೆ 5ಕ್ಕೆ ನಡೆಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನವಾದ ಸೆ.17ರಿಂದ ಮಹಾತ್ಮಾ ಗಾಂಧಿ ಜನ್ಮದಿನವಾದ ಅ.2ರ ವರೆಗೆ ನಡೆಯುವ ಸೇವಾ ಪಾಕ್ಷಿಕ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕು ಎಂದರು. ಸೇವಾ ಪಾಕ್ಷಿಕದ ಸಂಚಾಲಕ ಸುಬ್ರಾಯ ವಾಳ್ಕೆ, ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ, ಪ್ರಮುಖರಾದ ಕೆ ಜಿ ನಾಯ್ಕ, ಆರ್ ಡಿ ಹೆಗಡೆ, ಅಶೋಕ ಛಲವಾದಿ, ಈಶ್ವರ್ ನಾಯ್ಕ ಇದ್ದರು.