ಏನು ವಿಚಾರ ಇಲ್ಲದಿದ್ದರೂ ತೀಟೆ ಮಾಡೋದು ವಿರೋಧ ಪಕ್ಷದ ಕೆಲಸ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ದಸರಾ ಉದ್ಘಾಟಕರ ಆಯ್ಕೆಗೆ ಬಿಜೆಪಿ ವಿರೋಧ ವಿಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಗುರುವಾರ ಮಧ್ಯಾಹ್ನ ನಗರದ ಜಿಪಂ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು ಏನು ಇಲ್ಲದಿದ್ದರೆ ಈ ರೀತಿ ಕ್ಯಾತೆ ತೆಗೆಯುತ್ತಾರೆ. ಈ ಹಿಂದೆ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ್ದಾರೆ. ಇದು ಐತಿಹಾಸಿಕ ದಸರಾ ಯಾವುದೇ ಸಮಾಜ ಅಡ್ಡ ಬರಲ್ಲ. ಸಾಹಿತಿಗಳು ಸೇರಿ ಅನೇಕರು ಉದ್ಘಾಟನೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಬಾನು ಮುಷ್ತಾಕ್ ಸಾಧನೆ ಇದೆ ದೊಡ್ಡ ಗೌರವ ಇದೆ. ಅದಕ್ಕೆ ಅವರನ್ನು ದಸರಾ ಉದ್ಘಾಟನೆಗೆ ನಮ್ಮ ಸರ್ಕಾರ ಕರೆದಿದೆ ಎಂದರು.