ಕೊಳ್ಳೇಗಾಲ: ತಾಲೂಕಿನ ಪ್ರಕಾಶಪಾಳ್ಯ ಗ್ರಾಮದಲ್ಲಿ ಯುವತಿ ನಾಪತ್ತೆಯಾದ ಘಟನೆ ಬುಧವಾರ ಸಂಜೆ 5ರಲ್ಲಿ ವರದಿಯಾಗಿದೆ. ಈ ಕುರಿತು ಆಕೆಯ ಗಂಡ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದೂರು ನೀಡಿದ್ದಾರೆ. ಪ್ರಕಾಶಪಾಳ್ಯದ ಜೋಸ್ಟಿನ್ ಎಂಬಾಕೆಯ ನಾಪತ್ತೆಯಾಗಿರುವ ಮಹಿಳೆಯಾಗಿದ್ದಾರೆ ಹಬ್ಬವಿದೆ ಎಂದು ನನ್ನ ಹೆಂಡತಿಗೆ ಅವರ ತಂದೆಯ ಮನೆಯವರು ಊರಿಗೆ ಬರುವಂತೆ ಹೇಳಿದ್ದರು. ಅದಕ್ಕಾಗಿ ಅವಳು ನಮ್ಮ ಮನೆಯಿಂದ ಹೊರಟಳು. ಆದರೆ, ಅವರು ತಂದೆಯ ಮನೆಯವರೆಗೆ ತಲುಪದೆ ನಾಪತ್ತೆಯಾಗಿದ್ದಾರೆ.ನಾವು ಮನೆಯವರೊಂದಿಗೆ ಮತ್ತು ನೆರೆಮನೆಯವರ ಸಹಾಯದಿಂದ ಎಲ್ಲ ಕಡೆ ಹುಡುಕಿದರೂ ಸಹ ಅಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದೂರಿದ್ದಾರೆ