ಗೌರಿಬಿದನೂರು ನಗರದ ಹೊರವಲಯದಲ್ಲಿನ ತಾಲೂಕು ಕಚೇರಿಗೆ ವಾಟದಹೊಸಹಳ್ಳಿ ಕೆರೆ ಅಚ್ಚು ಕಟ್ಟುವುದಾರರ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಮ್ಮ ಜಾನುವಾರುಗಳೊಂದಿಗೆ ಪ್ರತಿಭಟನೆಯನ್ನು ನಡೆಸಿದರು. ವಾಟದಹೊಸಹಳ್ಳಿ ಕೆರೆಯ ನೀರನ್ನು ಗೌರಿಬಿದನೂರು ನಗರಕ್ಕೆ ಹರಿಸಲು ಈಗಾಗಲೇ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ ಭೂಮಿ ಪೂಜೆಯನ್ನು ಕೂಡ ಶಾಸಕ ಕೆಚ್ ಪುಟ್ಟಸ್ವಾಮಿ ಗೌಡ ,ಸಚಿವರಾದ ಬೈರತಿ ಸುರೇಶ್, ಡಾ.ಎಂ ಸಿ ಸುಧಾಕರ್ ಮತ್ತಿತರು ಚಾಲನೆಯನ್ನು ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿರುವಂತಹ ರೈತರು ಇಂದು ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.