ಕಾಡಾನೆಗೆ ಊಟ ರೈತನಿಗೆ ಪ್ರಾಣ ಸಂಕಟ ಎಂಬಂತೆ ನಡುರಸ್ತೆಯಲ್ಲಿ ಪಲ್ಟಿಯಾದ ಈಚರ್ ಕಂಡು ಕಾಡಾನೆಯೊಂದು ಓಡೋಡಿ ಬಂದು ಟೊಮೊಟೊ ತಿಂದ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಸಮೀಪ ತಡರಾತ್ರಿ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ. ಚಿಕ್ಕಮಗಳೂರಿನಿಂದ ಕೇರಳಕ್ಕೆ ಈಚರ್ ನಲ್ಲಿ ಟೊಮೊಟೊ ಸಾಗಿಸುವಾಗ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಪಲ್ಟಿಯಾಗಿದೆ, ಸುಮಾರು 210 ಬಾಕ್ಸ್ ಟೊಮೊಟೊ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಬಿದ್ದಿದ್ದನ್ನು ಕಂಡ ಕಾಡಾನೆಯೊಂದು ಟೊಮೊಟೊ ಆಸೆಗೆ ಓಡೋಡಿ ಬಂದ ತಿಂದಿದೆ. ಮೊದಲೇ ಬೆಲೆ ಇಲ್ಲದೆ ಪರದಾಡುತ್ತಿದ್ದ ರೈತನಿಗೆ ಟೊಮೊಟೊ ರಸ್ತೆಪಾಲಾಗಿ ಮತ್ತಷ್ಟು ಕಂಗಲಾಗುವಂತೆ ಮಾಡಿದೆ.