ಮದ್ದೂರಿನಲ್ಲಿ ಶ್ರೀ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದರೂ ಮುಸ್ಲಿಮರ ಪರ ಕಾಂಗ್ರೆಸ್ಸಿಗರು ಮಾತನಾಡುತ್ತಾ, ಹಿರಿಯಕ್ಕನ ಚಾಳಿ ಮನೆ ಮಂದಿಗೆ ಲ್ಲಾ ಎಂಬAತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮೆಚ್ಚಿಸಲು ಹಿಂದೂಗಳ ಮೇಲೆಯೇ ಆರೋಪಗಳ ಪಟ್ಟಿ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಪ ಸದಸ್ಯ ಡಿ.ಎಸ್.ಅರುಣ ಆರೋಪಿಸಿದ್ದಾರೆ. ದಾವಣಗೆರೆ ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮದ್ದೂರು ಕಲ್ಲು ತೂರಾಟದಲ್ಲಿ ಸಂತ್ರಸ್ಥರಾದ ಬಹುಸಂಖ್ಯಾತ ಹಿಂದೂಗಳ ಪರ ಮಾತನಾಡದ ಕಾಂಗ್ರೆ ಸ್ಸಿಗರ ಮುಸ್ಲಿಮರ ಓಲೈಕೆ ದಿನದಿನಕ್ಕೂ ಹೆಚ್ಚುತ್ತಿದೆ ಎಂದರು.