ಕೇರಳದ ಯೂಟ್ಯೂಬರ್ ಮನಾಫ್ ಅವರು ಸೋಮವಾರ ಸೆ.8 ರಂದು ಮಧ್ಯಾಹ್ನ 12.20 ರ ಸುಮಾರಿಗೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಮಾಧ್ಯಮಗಳ ಕಣ್ಣು ತಪ್ಪಿಸಲು ಒಳ ದಾರಿಯ ಮೂಲಕ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಮನಾಫ್ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ಧರ್ಮಸ್ಥಳದಲ್ಲಿ ತಲೆಬುರುಡೆಯನ್ನು ತೆಗೆಯುತ್ತಿರುವ ವಿಡಿಯೋ ಸಹಿತ ಇನ್ನೂ ಹಲವು ವಿಡಿಯೋಗಳನ್ನು ಇವರು ಹಾಕಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಈತನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿತ್ತು.