ಕೆಜಿಎಫ್ ತಾಲೂಕಿನ ಜನತೆ ಯಾವುದಾದರೂ ಕೆಲಸಕ್ಕೆ ಶಾಸಕರ ಲೆಟರ್ ಹೆಡ್ ಬೇಕಾದರೆ ಕೋಲಾರಿಗೆ ಹೋಗುವಂತಹ ದುಸ್ಥಿತಿಯನ್ನು ತಪ್ಪಿಸಬೇಕು, ತಾಲೂಕಿನಲ್ಲಿ ಇರುವಂತಹ ಒಬ್ಬ ಗುತ್ತಿಗೆದಾರರು ಸಹ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಇಂತಹ ಬದಲಾವಣೆಗಳಿಗಾಗಿ ಜನರು ಕಾಯುತ್ತಿದ್ದಾರೆ ಎಂದು ಸಮಾಜ ಸೇವಕ ವಿ ಮೋಹನ್ ಕೃಷ್ಣ ಹೇಳಿದ್ರು. ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು ಕೆಜಿಎಫ್ ಕ್ಷೇತ್ರದಲ್ಲಿ ಚುನಾವಣೆಯ ಇಂದಿನ ದಿನ ಇಲ್ಲಸಲ್ಲದ ಸುಳ್ಳು ಭರವಸೆ ಕೊಟ್ಟು ಹಣ ನೀಡಿ ಮತವನ್ನು ಖರೀದಿ ಮಾಡುವ ಮೂಲಕ ಶಾಸಕರಾಗಿ ಆಯ್ಕೆಯಾಗುವ ನಾಯಕರಿಗೆ ಈ ಬಾರಿ ಚುನಾವಣೆಯಲ್ಲಿ ತಮ್ಮ ಮತ ಮಾರಾಟಕ್ಕಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡಬೇಕಿದೆ ಎಂದ್ರು