ಕರ್ನಾಟಕ ರಾಜ್ಯ ಸರ್ಕಾರ ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರ ವರೆಗೆ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್ ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ದಂಡವನ್ನ ಪಾವತಿಸಲು ಶೇ.50ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿತ್ತು. ಸೆಪ್ಟೆಂಬರ್ 12 ಶುಕ್ರವಾರ ಕಡೆಯ ದಿನವಾದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರು ಸರತಿ ಸಾಲಿನಲ್ಲಿ ನಿಂತು ರಾತ್ರಿಯ ವರೆಗೆ ದಂಡವನ್ನ ಪಾವತಿಸಿದ್ದಾರೆ. ಒಟ್ಟು 50451 ಪ್ರಕರಣಕ್ಕೆ ಸಂಬಂಧಿಸಿದಂತೆ 2,09,38,750 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ವಾಟ್ಸಪ್ ಸಂದೇಶದ ಮೂಲಕ ಶನಿವಾರ ಮಾಹಿತಿ ನೀಡಿರುತ್ತಾರೆ