ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ 186 ನೇ ಜಿಲ್ಲಾ ಮಟ್ಟದ ವಿಶ್ವಛಾಯಾಗ್ರಹಣ ದಿನವನ್ನು ಸಂಭ್ರಮದಿಂದ ಪಟ್ಟಣದ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಶನಿವಾರ ಆಚರಣೆ ಮಾಡಲಾಯಿತು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಾರ್ಯಕ್ರಮದಲ್ಲಿ ಮಾತನಾಡಿ, ಛಾಯಾಗ್ರಾಹಕರು ವೃತ್ತಿಯ ಜೊತೆಗೆ ಹವ್ಯಾಸವಾಗಿ ಚಿತ್ರಸೆರೆಹಿಡಿಯುವ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ, ಸ್ಥಳೀಯ ಚಿತ್ರಣ ಮತ್ತು ಸೌಂದರ್ಯವನ್ನ ಹಾಗೂ ಪ್ರಾಣಿ ಪಕ್ಷಿ ಸಂಕುಲ , ವನ್ಯಸಂಪತ್ತಿನ ಸೊಬಗನ್ನ ಹೊರಜಗತ್ತಿಗೆ ಪರಿಚಯಿಸುವಲ್ಲಿ ಇವರ ಪಾತ್ರ ಬಹಳ ಪ್ರಮುಖವಾದುದು ಎಂದರು.