ಶಾಮನೂರು ಕುಟುಂಬದ ಬಗ್ಗೆ ಫೇಸ್ ಬುಕ್'ನಲ್ಲಿ ಅವಹೇಳನ: ಪೋಸ್ಟ್ ಹಾಗೂ ಶೇರ್ ಮಾಡಿದವನ ಮೇಲೆ ಎಫ್.ಐ.ಆರ್ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಗಣೇಶ ಮೆರವಣಿಗೆ ಕುರಿತು ಮಾತನಾಡಿದ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಅವಹೇಳನಕಾರಿಯಾಗಿ ಎಡಿಟ್ ಮಾಡಲಾಗಿದ್ದು, ಪೋಸ್ಟ್ ಮಾಡಿದ ರವಿರಾಜ್ ಹಿಂದೂ ಮತ್ತು 14 ಜನರಿಗೆ ಶೇರ್ ಮಾಡಿದ ದರ್ಶನ್ ಮೇಲೆ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗುರುವಾರ ಬೆಳಿಗ್ಗೆ 12 ಗಂಟೆಗೆ ದಾವಣಗೆರೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಲಾಗಿದೆ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಲೀಗಲ್ ಸೆಲ್ ಛೇರ್ಮನ್ ರಾಕೇಶ್ ದೂರು ನೀಡಿದ್ದಾರೆ.