ಶಿವಮೊಗ್ಗ ನಗರದ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ಯವರಿಗೆ ಶಿವಮೊಗ್ಗ ನಗರದ ವಿವಿಧಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ಗುರುವಾರ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ. ಆ.23ರಂದು ಶಿವಮೊಗ್ಗ ನಗರದ ಹೊಸ ಮನೆ, ಹೊಸಮನೆ ಚಾನೆಲ್ ಏರಿಯ, ಶರಾವತಿ ನಗರ ಎ ಮತ್ತು ಬಿ ಬ್ಲಾಕ್, ಆಯುರ್ವೇದ ಕಾಲೇಜು, ಕುವೆಂಪುರ ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಮೆಸ್ಕಾಂ ಅಧಿಕಾರಿಗಳು ತಿಳಿಸಿರುತ್ತಾರೆ.