ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ನಗರದ ಅಮ್ಮವಾರಿಪೇಟೆ ಯಿಂದ ಕ್ಲಾಕ್ ಟವರ ಮೂಲಕ ಈದ್ಗ ಮೈದಾನ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು. ಶುಕ್ರವಾರ ಮಧ್ಯಾಹ್ನ ಆರಂಭವಾದ ಮೆರವಣಿಗೆಯು ಅಮ್ಮವಾರಿಪೇಟೆ, ಬಸ್ ನಿಲ್ದಾಣ ಸರ್ಕಲ್, ಕ್ಲಾಕ್ ಟವರ್ ಮೂಲಕ ಸಾಗಿ ಈದ್ಗಾ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು. ಪ್ರವಾದಿಗಳ 1500ನೇ ಹುಟ್ಟುಹಬ್ಬದ ಅಂಗವಾಗಿ ಅವರ ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಿಲ್ಲಿ ಹಮ್ಮಿಕೊಂಡಿರುವ ಈ ಮೆರವಣಿಗೆ, ಎಲ್ಲಾ ಧರ್ಮದವರು, ಜಾತಿಯವರು ಸೇರಿ ಮಾಡುವಂತಹ ಕಾರ್ಯವಾಗಿದೆ. ಪ್ರವಾದಿಗಳ ಸಂದೇಶದಂತೆ ನಾವು ನಮ್ಮ ನೆರೆಹೊರೆಯವರ ಜತೆ ಹಾಗೂ ಅನ್ಯ ಧರ್ಮೀಯರ ಜತೆ ಶಾಂತಿಯ ಸಹಬಾಳ್ವೆ ನಡೆಸಬೇಕುಎಂದ್ರು