ಕುಷ್ಟಗಿ ತಾಲೂಕಿಗೆ ರೈಲು ಬಂದ ಖುಷಿಯಲ್ಲಿ ರೇಲ್ವೆ ಸ್ಟೇಶನ್ ಮಾದರಿಯಲ್ಲಿಯೇ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಹಳೆ ಬಜಾರ್ ನಲ್ಲಿ ರೈಲ್ವೆ ಟಿಸಿ ಮಾದರಿಯ ಗಣೇಶ, ಕೂರಿಸಿ ರೇಲ್ವೆ ಸ್ಟೇಶನ್ ಮಾದರಿಯಲ್ಲಿ ಟೆಂಟ್ ಹಾಕಿ, ಗಣೇಶನ ಕೈನಲ್ಲಿ ಹಸಿರು ನಿಶಾನೆ ಕೊಡಲಾಗಿದ್ದು, ಈ ಟಿಸಿ ಗಣೇಶ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಕುಷ್ಟಗಿ ಜನರ ಬಹುದಿನದ ಕನಸಿ ರೈಲು ಸೇವೆ, ಹೀಗಾಗಿ ಈ ವರ್ಷ ಮೊದಲ ಬಾರಿಗೆ ರೈಲು ಸೇವೆ ಬಂದ ಹಿನ್ನೆಲೆ ಹಳೆ ಬಜಾರ್ ಗಜಾನನ ವತಿಯಿಂದ ರೈಲು ಮಾದರಿಯಲ್ಲೆ ಗಣೆಶ ಪ್ರತಿಷ್ಠಾಪನೆ ಮಾಡಲಾಗಿದೆ...