ರಾಜ್ಯ ಸರ್ಕಾರ ವಿಪರೀತ ತುಷ್ಟಿಕರಣದಲ್ಲಿ ತೊಡಗಿದೆ ಭದ್ರಾವತಿ ಶಾಸಕ ಸಂಗಮೇಶ್ ಇಷ್ಟು ಬೆಳೆಯಲು ಹಿಂದುಗಳ ಕೊಡುಗೆ ಬಹಳ ಇದೆ ಅವರ ಮುಂದಿನ ಜನ್ಮದ ಬಗ್ಗೆ ಮಾತನಾಡಿದ್ದಾರೆ. ಆದಷ್ಟು ಬೇಗ ಅವರು ಧರ್ಮ ಬದಲಾಯಿಸಲು ದಿನ ನಿಗಧಿ ಮಾಡಬೇಕು ಎಂದು ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ರವಿಕುಮಾರ್ ಒತ್ತಾಯಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮದ್ದೂರಿನ ಗಲಾಟೆ ಪ್ರಿಪ್ಲಾನ್ ಗಲಭೆಯಾಗಿದೆ. ಗಣೇಶನ ಉತ್ಸವ ಹಬ್ಬಕ್ಕೆ ಮೆರವಣಿಗೆಗೆ ತೊಂದರೆ ಕೊಡಲು ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.