ಮದ್ಯದ ಅಂಗಡಿಯೊಂದರ ರೋಲಿಂಗ್ ಶಟರ್ ಮೀಟಿ 21 ಬಗೆಯ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನ ಕಳ್ಳರು ಕದ್ದುಇರುವ ಘಟನೆ ಶಿವಮೊಗ್ಗದ ಗೋಪಾಲದ ಚನ್ನಾಂಬಿಕ ವೈನ್ಸ್ ಅಂಗಡಿಯಲ್ಲಿ ನಡೆದ ಈ ಕುರಿತಾದ ಮಾಹಿತಿಯು ಮಂಗಳವಾರ ಲಭ್ಯವಾಗಿದೆ ಅ.4ರ ರಾತ್ರಿ ಅಂಗಡಿ ಮಾಲೀಕ ಬಾಗಿಲಿನ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಕಿಂಗ್ ಬಂದಾಗ ರೋಲಿಂಗ್ ಶೀಟರ್ ಮೀಟಿರುವುದು ಗೊತ್ತಾಗಿದೆ.ಪರಿಶೀಲಿಸಿದಾಗ 21 ಬಗೆಯ 1.49 ಲಕ್ಷ ರೂ ಮೌಲ್ಯದ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿದ್ದು ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಕೂಡ ಕಳುವಾಗಿದೆ ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ