ಮುಗಳಖೋಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾವು ಪ್ರತೇಕ್ಷ. ರೋಗಿಗಳು ಚಿಕಿತ್ಸೆಗೆಂದು ಬಂದಿದ್ದಾಗ ಆಸ್ಪತ್ರೆಯ ಒಳಗೆ ಹಾವು ಕಾಣಿಸಿಕೊಂಡಿದೆ. ಇದರಿಂದ ರೋಗಿಗಳು ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಸ್ಥಳೀಯ ಯುವಕರು ಧೈರ್ಯದಿಂದ ಮುಂದೆ ಬಂದು ಹಾವನ್ನು ಸುರಕ್ಷತವಾಗಿ ಹಿಡಿದು, ಯಾರಿಗೂ ಅಪಾಯವಾಗದಂತೆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳು ಚಿಕಿತ್ಸೆಗೆಂದು ಬಂದಿದ್ದಾಗ ಆಸ್ಪತ್ರೆಯ ಒಳಗೆ ಹಾವು ಕಾಣಿಸಿಕೊಂಡಿದೆ.