ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ರಾಜ್ಯದ ವಿವಿಧ ಮಠಾಧೀಶರು ಹಮ್ಮಿಕೊಂಡಿದ್ದ ಬಸವ ಸಾಂಸ್ಕೃತಿಕ ಉತ್ಸವಕ್ಕೆ ಸೋಮವಾರ ಸಾಯಂಕಾಲ 5ಗಂಟೆ ಸುಮಾರಿಗೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದರು. ಬಸವ ಸಂಸ್ಕೃತಿಕ ಉತ್ಸವದಲ್ಲಿ ಮಠಾಧೀಶರು ಬಸವ ಅಭಿಮಾನಿಗಳು ಭಾಗಿಯಾಗಿದ್ದರೂ ಇನ್ನೂ ಮಹಿಳೆಯರು ತಲೆಯ ಮೇಲೆ ವಚನ ಪುಸ್ತಕವನ್ನು ಇಟ್ಟುಕೊಂಡು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಇನ್ನು ಬಸವ ಸಾಂಸ್ಕೃತಿಕ ಉತ್ಸವದ ಸ್ತಬ್ಧ ಚಿತ್ರದ ಮೆರವಣಿಗೆವು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿ ವಚನ ಸಾಹಿತ್ಯದ ಮಾಹಿತಿಯನ್ನು ನೀಡಲಿದೆ ಎಂದು ಹೇಳಿದರು.