ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಗೋಲಪಲ್ಲಿ ಬಳಿಯ ಬೀದರ್, ಬೆಂಗಳೂರು ಹೆದ್ದಾರಿ ಮೇಲೆ ನಾಲ್ಕು ಲಾರಿಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಬಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವ ಘಟನೆ ನಡೆದಿದೆ. ಭಾನುವಾರ ಬೆಳಗಿನ ಜಾವ ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ ಬೈಕ್ ಒಂದು ಲಾರಿ ಚಕ್ರದಲ್ಲಿ ಸಿಲುಕಿ ಜಖಂ ಗೊಂಡಿದೆ ಹಾಗೂ ಬುಲೆರೋ ಪಿಕಪ್ ವಾಹನ ಅಪಘಾತಕ್ಕೀಡಾಗಿದೆ, ಸರಣಿ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳ ಸಾಲು ಕಂಡುಬಂದಿದ್ದು,ಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.