ಎತ್ತು ತೊಳೆಯಲು ಹೋದ ವ್ಯಕ್ತಿಗೆ ಮೊಸಳೆ ಎಳೆದು ಕೊಂಡು ಹೋದ ಪ್ರಕರಣ ಕೊನೆಗೂ ವ್ಯಕ್ತಿಯ ಶವ ಪತ್ತೆಯಾಗಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ಕಾಸಪ್ಪ ಹಣಮಂತ ಕಂಬಳಿ ಎಂಬಾತ ಎತ್ತು ತೊಳೆಯಲು ಹೋದ ವೇಳೆ ಮೊಸಳೆ ಬಾಯಲ್ಲಿ ಸಿಲುಕಿದ್ದ. ಬಳಿಕ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಸಿ ಕೊನೆಗೂ ಶವ ಪತ್ತೆ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದೆ..