ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆ ಕೂಂಬಿಂಗ್ 2ನೇ ದಿನ ಗುರುವಾರವೂ ಕೂಡ ಮುಂದುವರೆದಿದೆ. ಹುಲಿಯ ಸುಳಿವು ಮಾತ್ರ ದೊರೆತಿಲ್ಲ. ಬೊಮ್ಮಲಾಪುರ-ವಡೆಯಪುರ ವ್ಯಾಪ್ತಿಯ ಜಮೀನು, ಹಳ್ಳಕೊಳ್ಳದಲ್ಲಿ ಗುಂಡ್ಲುಪೇಟೆ ಎಸಿಎಫ್ ಸುರೇಶ್ ನೇತೃತ್ವದಲ್ಲಿ ಸುಮಾರು 15ಕ್ಕೂ ಅಧಿಕ ಅರಣ್ಯಾಧಿಕಾರಿಗಳ ತಂಡ ಪಾರ್ಥ ಸಾರಥಿ ಎಂಬ ಸಾಕಾನೆಯನ್ನು ಬಳಕೆ ಮಾಡಿಕೊಂಡು ಕಾರ್ಯಾಚರಣೆ ಆರಂಭಿಸಿದೆ. ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಪ್ರದೇಶದಲ್ಲಿ ಹುಡುಕಾಟ ನಡೆಸಿದರು ಸಹ ಹುಲಿಯ ಗುರುತು ಪತ್ತೆಯಾಗಿಲ್ಲ ಎಂದು ಡಿಆರ್‍ಎಫ್‍ಓ ಶಿವಕುಮಾರ್ ತಿಳಿಸಿದರು.