ನಾಡಿನಾದ್ಯಂತ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ ಬುಧವಾರ ನಡೆಯಲಿರುವ ಗಣೇಶೋತ್ಸವಕ್ಕೆ ಮಲೆನಾಡು ಶಿವಮೊಗ್ಗ ಇಂದಿನಿಂದಲೇ ಸಜ್ಜಾಗಿದ್ದು, ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಮನು ಜೋರಾಗೆ ನಡೆಯುತ್ತಿದೆ.ಇನ್ನಾ ಪರಿಸರ ಸ್ನೇಹಿ ಗಣೇಶ ಮೂರ್ತಿಗಳತ್ತ ಸಾರ್ವಜನಿಕರು ಮುಖ ಮಾಡಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧಡೆಯಿಂದ ಗಣಪತಿ ತಯಾರಿಸಿಕೊಂಡು ಮಾರಾಟಕ್ಕೆ ಬಂದಿ ಮಾರಾಟವನ್ನು ಮಾಡ್ತಿದ್ದಾರೆ. ಬುಧವಾರ ಹಬ್ಬವಿದ್ದರೂ ಸಹ ಮಂಗಳವಾರವೇ ತಮ್ಮ ನೆಚ್ಚಿನ ಗಣಪತಿ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.