ಕಲಬುರಗಿ : ಸೆಪ್ಟೆಂಬರ್ 17 ರಂದು ಜಿಲ್ಲೆಯ ಎಲ್ಲಾ ಅಂಗಡಿಮುಂಗಟ್ಟುಗಳು, ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು.. ಇಲ್ಲಾವಾದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಕ್ಕೆ ಅಂದು ಸಿಎಂ ಆಗಮಿಸುತ್ತಿದ್ದು, ಸಿಎಂಗೆ ಮುತ್ತಿಗೆ ಹಾಕಲಾಗುವುದೆಂದು ಕಲ್ಯಾಣ ಕರ್ನಾಟಕ ಸೇನೆ ಅಧ್ಯಕ್ಷ ದತ್ತು ಹಯ್ಯಾಳಕರ್ ಹೇಳಿದ್ದಾರೆ.. ಸೆ8 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಭಾಗದ ಸಮಸ್ಯೆಗಳ ಬಗ್ಗೆ ಸಿಎಂ ಗಮನಕ್ಕೆ ತರಬೇಕು ಅಂದರೆ ಸೂಕ್ತ ಅವಕಾಶ ಕೊಡಲ್ಲ.. ಹೀಗಾಗಿ ಈ ಬಾರಿ ಸಿಎಂ ಭೇಟಿಗೆ ಸೂಕ್ತ ಸಮಯದೊಂದಿಗೆ ಅವಕಾಶ ಕಲ್ಪಿಸಬೇಕೆಂದು ದತ್ತು ಹಯ್ಯಾಳಕರ್ ಹೇಳಿದ್ದಾರೆ..