ಹೆಸ್ಕಾಂ, ಕುಮಟಾ ಉಪವಿಭಾಗದ ಕುಮಟಾ ನಗರ ಶಾಖೆಯ ವ್ಯಾಪ್ತಿಯ 11ಕೆ.ವಿ ಇಂಡಸ್ಟ್ರೀಯಲ್ ಫೀಡರಿನ ಮಾರ್ಗದಲ್ಲಿ ಮತ್ತು ಗ್ರಾಮೀಣ ಶಾಖೆಯ 11ಕೆ.ವಿ ವಾಲ್ಗಳ್ಳಿ ಫೀಡರಿನ ಮಾರ್ಗದಲ್ಲಿ ತುರ್ತುನಿರ್ವಹಣಾ ಕಾರ್ಯವಿರುವುದರಿಂದ ಸೆ.10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರಿಗೆ ಹಾಗೂ 110ಕೆ.ವಿ ಕುಮಟಾ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ 33ಕೆ.ವಿ ಗೋಕರ್ಣ ಉಪಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಕಚೇರಿಯು ಸೋಮವಾರ ಸಂಜೆ 6ಕ್ಕೆ ತಿಳಿಸಿದೆ.