ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾ ನಾಯಕ ಎನ್.ಎಸ್ ಬೋಸರಾಜು ಅವರು ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಂ ಸಭೆ ಕರೆದಿದ್ದಾರೆ, ಆಯಾ ಕ್ಷೇತ್ರದಲ್ಲಿ ಸಂಬಂಧಪಟ್ಟ ಅಹವಾಲುಗಳನ್ನ ಸಿಎಂ ಗಮನಕ್ಕೆ ತಂದಿದ್ದಾರೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಯಾವ ರೀತಿ ಬಗೆಹರಿಸಬೇಕು ಎಂಬ ಪ್ರಯತ್ನ ಮಾಡ್ತಿದ್ದಾರೆ ಎಂದರು. ಸಚಿವರ ವಿರುದ್ಧ ಎಂಎಲ್ಸಿಗಳ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಅದೆಲ್ಲರದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದಾರೆ. ಆ ರೀತಿಯ ದೂರಿನ ಚರ್ಚೆ ಮಾಡ್ತೀವಿ ಎಂದರು.