ಮದ್ದೂರು ಗಲಭೆ ಕುರಿತಂತೆ ಶಿವಮೊಗ್ಗದಲ್ಲಿ ಎಂಎಲ್ಸಿ ಡಿ.ಎಸ್. ಅರುಣ್ ಪ್ರತಿಕ್ರಿಯೆ ನೀಡಿದ್ದಾರೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಣಪತಿ ವಿಸರ್ಜನೆ ಸಮಯದಲ್ಲಿ ಕಲ್ಲು ಹೊಡೆಯುತ್ತಾರೆ.ನಾಳೆ ಜನರ ಮೇಲೆ ಕಲ್ಲು ಹೊಡೆಯುತ್ತಾರೆ. ಯಾರನ್ನು ಕೊಲೆ ಮಾಡಿದರು ಇವರಿಗೆ ಯಾವ ಹೆದರಿಕೆ ಇಲ್ಲ. ಕಾನೂನು ವ್ಯವಸ್ಥೆಯಲ್ಲಿ ಹೆದರಿಕೆ ಇಲ್ಲ. ಜಮೀರ್ ಅಹ್ಮದ್ ಎಲ್ಲಾ ಕಡೆ ಹೋಗಿ ಹೇಳಿ ಬರುತ್ತಿದ್ದಾರೆ ನೀವು ಏನು ಬೇಕಾದರೂ ಮಾಡಿದ್ದೀನಿ ಅಂತ.ಈ ತರಹದ ಯೋಚನೆ ಮಾಡುತ್ತಿರುವುದೇ ಇವತ್ತು ದಂಗೆಗಳಾಗುತ್ತಿರುವುದಕ್ಕೆ ಕಾರಣ ಎಂದು ಎಂ ಎಸ್ ಸಿ ಡಿ ಎಸ್ ಅರುಣ್ ಆರೋಪಿಸಿದ್ದಾರೆ.