ಸಕಲೇಶಪುರ: ಮನೆಯ ಡೋರ್ ಲಾಕ್ ಮುರಿದು ಬೀರುವಿನಲ್ಲಿದ್ದ, ಸುಮಾರು 5.20 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 1.50 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಹಾಗೂ 1.50 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಣಿ ಎಂಬುವರ ಪತಿ ಈಚರ್ ವಾಹನ ಇಟ್ಟುಕೊಂಡಿದ್ದು ಬಾಡಿಗೆಗೆಂದು ಬೆಂಗಳೂರಿಗೆ ಹೋಗಿದ್ದರು. ಅವರ ಮಗ ಹಾಸನದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆ.31 ರಂದು ಬೆಳಿಗ್ಗೆ ರಾಣಿ ಅವರು ಮನೆಯ ಕೆಲಸ ಮುಗಿಸಿ ಮದ್ಯಾಹ್ನ 2.30 ಗಂಟೆಯಲ್ಲಿ ಮನೆಯ ಡೋರ್ ಲಾಕ್ ಹಾಕಿಕೊಂಡು ಎದುರು ಮನೆಯ ಮಂಜುನಾಥ್