ಮೊಳಕಾಲ್ಮುರು:-ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಗಣೇಶ ಮೂರ್ತಿಯನ್ನು ಭಾನುವಾರದಂದು ಭಕ್ತಿ ಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು. ಪಟ್ಟಣದ ಪದ್ಮಶಾಲಿ ಕಲ್ಯಾಣ ಮಂಟಪದ ಆವರಣದಲ್ಲಿ ಚಿಣ್ಣರ ಗಣಪನ ಮೆರವಣಿಗೆಯು ಗಮನ ಸೆಳೆಯಿತು,ಚಿಣ್ಣರು ಒಟ್ಟುಗೂಡಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿವಿಧ ಪೂಜೆಗಳನ್ನು ಸದ್ಭಕ್ತಿಯಿಂದ ನಡೆಸಿದರು. ಭಾನುವಾರದಂದು ಗಣಪನನ್ನು ವಿಸರ್ಜನೆಗೆ ಯಾವುದೇ ವಾಹನವಿಲ್ಲದೆ ಬಾಲಕರು ನೆತ್ತಿಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರು, ಗಣಪತಿ ಬಪ್ಪ ಮೋರೆಯ ಎಂದು ಘೋಷಣೆಗಳನ್ನು ಕೂಗುತ್ತಾ ರಟ್ಟುಗಳನ್ನು ಹಿಡಿದು ಕೋಲು ಹೊಡೆಯುತ್ತಾ ಸಾಗಿದರು.