ದೃಢಸಂಕಲ್ಪವಿದ್ದರೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ್ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಕಸೂದಿ ಬಡಾವಣೆಯಲ್ಲಿನ ಬಸವ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬುಧವಾರ ರಾತ್ರಿ 9ಕ್ಕೆ ಏರ್ಪಡಿಸಿದ್ಧ ಲಿಂಗಾಯತ ಸಮಾಜಕ್ಕಾಗಿ ಶ್ರಮಿಸಿದ ಶರಣಜೀವಿ ಕಲ್ಯಾಣರಾವ ಬಾಳೂರೆ ಸ್ಮರಣೋತ್ಸವ ಹಾಗೂ ವಚನ ಶ್ರವಣ ಸಮಾಪ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.