ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ನಡೆದಿದೆ. ಆರೀಫ್ ಇನಾಂದಾರ್ ಹತ್ಯೆಯಾಗಿರುವ ವ್ಯಕ್ತಿ. ಇನ್ನು ದಿನನಿತ್ಯ ಉತ್ನಾಳ ಗ್ರಾಮದಿಂದ ಸಿಂದಗಿ ಬೈಪಾಸ್ ಬಳಿಯಿರುವ ಗ್ಯಾರೇಜ್‌ಗೆ ಆಗಮಿಸಿ ಕೆಲಸ ಮಾಡುತ್ತಿದ್ದನು. ಆದರೆ, ತಡರಾತ್ರಿ ದುಷ್ಕರ್ಮಿಗಳು ಕಾರಿನ ಮೇಲೆ ಅಟ್ಯಾಕ್ ಮಾಡಿ ಆರೀಫ್‌ನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಶನಿವಾರ ನಸುಕಿನ ಜಾವ 2ಗಂಟೆ ಸುಮಾರಿಗೆ ಸುಮಾರಿಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.