ಚಿಕ್ಕಮಗಳೂರು ನಗರದಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಹಿಂದೂ ಮಹಾಗಣಪತಿ ಸೇರಿ ಹಲವೆಡೆ ಗಣೇಶನ ಪ್ರತಿಷ್ಠಾಪನೆಯೂ ಅದ್ದೂರಿಯಾಗಿ ನಡೆದಿದೆ. ಸಣ್ಣಪುಟ್ಟ ಗಣಪತಿಗಳ ವಿಸರ್ಜನೆಯೂ ಆಯಿತು. ಆದರೆ ಇನ್ನೂ ಪ್ರಮುಖ ಸಾರ್ವಜನಿಕ ಗಣಪತಿಗಳಾದ ಹಿಂದೂ ಮಹಾಗಣಪತಿ, ಆಜಾದ್ ಗಣೇಶ ವಿಜಯಪುರ ಗಣಪತಿ ಸೇರಿ ಹಲವೆಡೆ ವಿಸರ್ಜನೆಗೆ ದಿನವೂ ನಿಗದಿಯಾಗಿದೆ. ಈ ನಡುವೆ ವಿಸರ್ಜನೆಯ ಸಂದರ್ಭದಲ್ಲಿ ಡಿಜೆ ಬಳಸದಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಚಿಕ್ಕಮಗಳೂರಲ್ಲಿ ಸಂಘಟಕರು ಇದನ್ನೇ ಪ್ರಶ್ನಿಸಿ, ಸೌಂಡ್ ಸಿಸ್ಟಮ್ ಇಲ್ಲದೆ ವಿಸರ್ಜನೆ ಸಾಧ್ಯವಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ನಗರದ ವಿವಿಧ ಗಣಪತಿ ಸಂಘಟನೆಗಳು ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಸೌಂಡ್ ಸಿಸ್ಟಮ್ ಬಳಕೆಗೆ ಅವಕಾಶ ನೀಡಬೇಕೆಂದು ಚಿಕ್ಕಮಗಳೂರು ಎಸ್ಪಿ