ಚಿತ್ರದುರ್ಗ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ ಅವರನ್ನ ಇಡಿ ಅರೆಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಪಪ್ಪಿ ಅಭಿಮಾನಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ. ಚಿತ್ರದುರ್ಗ ನಗರದ ಮೆದೇಹಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾನೆ. ಅಭಿವೃದ್ಧಿಯ ಶಾಸಕ ಎಂಬ ಹೆಸರಿನ ಅವರಿಗೆ ಒಳ್ಳೆಯದಾಗಲಿ, ಕೆ.ಸಿ.ವೀರೇಂದ್ರ ಪಪ್ಪಿ ಇಡಿ ಸಂಕಷ್ಟದಿಂದ ಪಾರಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಅವರ ಹೆಸರು ಮತ್ತಷ್ಟು ಉಜ್ವಲವಾಗಲಿ ಅವ್ರು ಕಳಂಕ ಮುಕ್ತರಾಗಿ ಹೊರಬರಲಿ ಬಳಿಕ ನವೆಂಬರ್ - ಡಿಸೆಂಬರ್ ನಲ್ಲಿ ಶಬರಿಮಲೆಗೆ ಪಾದಯಾತ್ರೆ ಮಾಡುವೆ ಎಂದು ಪಪ್ಪಿ ಅಭಿಮಾನಿ ಬಸವರಾಜ್ ವಿಡಿಯೋ ವೈರಲ್ ಆಗಿದೆ.