ಸದಾಶಿವಗಡದ ಕೊಂಕಣ ಮರಾಠ ಸಭಾಭವನದಲ್ಲಿ ಕೊಂಕಣಿ ಭಾಷಾ ಅಭಿಮಾನಿ ಸಂಘ ಕಾರವಾರ ಇವರ ವತಿಯಿಂದ ಹಮ್ಮಿಕೊಂಡ ಮೂರನೇ ವರ್ಷದ ಗುಮಟೆ ಆರತಿ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ರವಿವಾರ ಸಂಜೆ 4ಕ್ಕೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಗುಮಟೆ ಆರತಿಯು ಪಾರಂಪರಿಕವಾಗಿ ನಡೆದು ಬಂದಿದ್ದು ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲೂ ನಡೆಸಿಕೊಂಡು ಹೋಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಗಣೇಶ ರಾಣೆ, ಉಷಾ ರಾಣೆ, ಶಶಿಕಾಂತ ರಾಣೆ , ದತ್ತಾತ್ರೇಯ ರಾಣೆ, ಪ್ರೀತಮ್ ಮಾಸೂರಕರ, ಸುರೇಂದ್ರ ಗಾಂವಕರ, ರಾಹುಲ್ ನಾಯ್ಕ, ವಿನೋದ ನಾಯ್ಕ ಹಾಗೂ ಇನ್ನಿತರರು ಇದ್ದರು.