ರಾಜ್ಯದ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾಸ್ಥಳವಾಗಿರುವ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಗಂಧೋತ್ಸವ ಕಾರ್ಯಕ್ರಮ ಗ್ರಾಮಸ್ಥರಿಂದ ಶುಕ್ರವಾರ ರಾತ್ರಿ ಸಡಗರ ಸಂಭ್ರಮದಿಂದ ನಡೆಯಿತು.ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರಿಂದ ಮೊದಲನೇ ದಿನ ಪಟೇಲ್ ಭಾಷು ಸಬ್ ಅವರ ಮೊಮ್ಮಗನಾದ ಶುಜಾತಾ ಪಾಷಾ,ಹಾಜಿ ಅನ್ಸರ್ ಖಾನ್, ಫೈಯಾಜ್,ಜಂಗ್ಲಿಪೀರ್ ಬಾಬಾ ದರ್ಗಾ ಮುತವಲ್ಲಿ ಬಾಬಾ ಜಾನ್,ಲೇಟ್ ಅನ್ವರ್ ಸಾಬ್,ನೂರ್ ಜಾನ್, ರವರ ಮನೆಗಳಿಂದ ಗಂಧದ ಮೆರವಣಿಗೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಹಜರತ್ ರವರ ಕೃಪೆಗೆ ಪಾತ್ರರಾದರು.