ಕೊಳ್ಳೇಗಾಲದ ಮೋಳೆ ಗ್ರಾಮದಲ್ಲಿ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿ ಓರ್ವನಿಗೆ ಪೆಟ್ಟಾಗಿರುವ ಪ್ರಸಂಗ ಜರುಗಿದೆ ಕೆಎ10ಇಡಿ 3770 ಬೈಕ್ ಹಾಗೂ ಕೆಎ 10 8830 ಅಶೋಕ್ ಲೈಲ್ಯಾಂಡ್ ಆಟೋ ನಡುವೆ ಕೊಳ್ಳೇಗಾಲದ ಮೋಳೆಯಲ್ಲಿ ಅಪಘಾತ ಜರುಗಿದ್ದು ಈ ವೇಳೆ ಬೈಕ್ ಸವಾರ ಹರೀಶ ಎಂಬುವವರಿಗೆ ಪೆಟ್ಟಾಗಿದೆ ನಂತರ ಬೈಕ್ ಸವಾರ ಹರೀಶನನ್ನು ಆಟೋದಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ಕರೆದುಕೊಂಡು ಚಿಕಿತ್ಸೆಗೆ ರವಾನಿಸಿದ್ದಾರೆ ಬಳಿಕ ಮಾಹಿತಿ ಅರಿತು ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಆಗಮಿಸಿ ಎರಡು ವಾಹನಗಳನ್ನು ಕೊಳ್ಳೇಗಾಲ ಪಟ್ಟಣ ಠಾಣೆಗೆ ಸ್ಥಳಾಂತರಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ