ತಾಲೂಕಿನ ಇತಿಹಾಸ ಪ್ರಸಿದ್ಧ ಹಳ್ಳಿಕೇಟ್ ಬಿ ಪಟ್ಟಣದ ಸೀವಿ ನಾಗನದ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ನಾಗೇಶ್ವರ ಮಾಲಾಧಾರಿ ಧರಿಸಿದ ಭಕ್ತರ ಇರಮುಡಿ ಸಮಾಪ್ತಿ ಸಮಾರಂಭ ಶನಿವಾರ ಸಂಜೆ 5ಕ್ಕೆ ಸಡಗರ ಸಂಭ್ರಮದಿಂದ ತೆರೆಕಂಡಿತು. ದೇವಸ್ಥಾನದ ಪ್ರಸನ್ನ ಅರ್ಚಕ ಬಸವರಾಜ ಹಾಲಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಭ್ರಮದ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಡೊಳ್ಳು ಕುಣಿತ, ಝಾಂಜ ನೃತ್ಯ ಮೆರವಣಿಗೆ ಮೆರಗು ಹೆಚ್ಚಿಸಿದವು.