ಹರಿವ ರಕ್ತ ಒಂದೇ, ಉಸಿರಾಡುವ ಗಾಳಿ, ಒಂದೇ ಕುಡಿಯುವ ನೀರು ಒಂದೇ, ನೆಲೆಸುವ ಭೂಮಿಯು ಒಂದೇ ಆಗಿರುವಾಗ ಜಾತಿಯಲ್ಲಿಂದ ಬಂತು? ಅದು ನಮ್ಮ ನಮ್ಮ ಅನುಕೂಲಕ್ಕಾಗಿ ನಾವು ಮಾಡಿಕೊಂಡ ವ್ಯವಸ್ಥೆ ಅಷ್ಟೇ ಕಾರಣ ಎಲ್ರು ಜಾತಿಭೇದ ಮರೆತು ವಿಶಾಲ ಹೃದಯಗಳಾಗಿ ಬದುಕಬೇಕು ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಸಲಹೆ ನೀಡಿದರು. ನಗರದಲ್ಲಿ ಮಂಗಳವಾರ ಮಧ್ಯಾನ 2:30ಕ್ಕೆ ನಡೆದ ಬೀದರ್ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆ ವಹಿಸಿ, ಮಾತಾಡಿದರು.