15 ಕೋಟಿ ವೆಚ್ಚದಲ್ಲಿ ಕೊಳ್ಳೇಗಾಲದ ಮುಡಿಗುಂಡ ಸೇತುವೆ ನಿರ್ಮಾಣ ಎಂದು ಜಿಲ್ಲಾಧಿಕಾರಿ ಸಿಟಿ ಶಿಲ್ಪನಾಗ್ ಮಾಹಿತಿ ನೀಡಿದರು ಕೊಳ್ಳೇಗಾಲ ಹನೂರು ಮಾರ್ಗ ಮಾದ್ಯಮಗಳ ಜೊತೆ ಅವರು ಮಾತನಾಡಿ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಸೇತುವೆ 1934ರಲ್ಲಿ ನಿರ್ಮಾಣ ಮಾಡಲಾಗಿತ್ತು. ಸೇತುವೆ ಶಿಥಿಲಗೊಂಡಿರುವುದರಿಂದ ಹಾಗೂ ಸೇತುವೆ ಚಿಕ್ಕದಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಈ ನಿಟ್ಟಿನಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ 15 ಕೋಟಿ ಅನುದಾನ ನೀಡಿದ್ದಾರೆ. ಈ ಸಂಬಂಧ ಹೊಸ ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.