ಕಬ್ಬಿನ ಆಸೆಗೆ ರಸ್ತೆಗಿಳಿದ ಕಾಡಾನೆಯೊಂದು ಎದುರಿಗೆ ಬಂದ ಲಾರಿ ಮೇಲೆ ದಾಳಿ ಮಾಡಿ ಕಬ್ಬು ಕಿತ್ತ ಘಟನೆ ಚಾಮರಾಜನಗರ ಸಮೀಪದ ಆಸನೂರು ಬಳಿ ನಡೆದಿದೆ. ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ನಿರಂತರವಾಗಿ ಕಾಡಾನೆ ಓಡಾಡುತ್ತಿದ್ದು ರಸ್ತೆ ಬದಿ ಬಂದು ನಿಂತು ಕಬ್ಬಿನ ವಸೂಲಿಗೆ ಇಳಿಯುತ್ತಿದೆ. ಇತರೆ ವಾಹನಗಳಗತ್ತ ಕಣ್ಣೆತ್ತಿಯೂ ನೋಡದ ಕಾಡಾನೆ ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನು ಟಾರ್ಗೆಟ್ ಮಾಡಿ ವಸೂಲಿಗೆ ಇಳಿಯುತ್ತಿದ್ದು ಲಾರಿ ಚಾಲಕರು ಹೈರಾಣಾಗಿದ್ದಾರೆ. ಅದರಂತೆ, ಕಾಡಾನೆಯೊಂದು ಲಾರಿಯೊಂದನ್ನು ತಡೆದು ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದ್ದು ಕೊನೆಗೂ ಒಂದು ಕಂತೆ ಕಬ್ಬನ್ನು ಎಳೆದೊಯ್ದಿದೆ.