ಕನಕಗಿರಿ ಪಟ್ಟಣದ ವಾರ್ಡ್ ನಂಬರ್ 13ರಲ್ಲಿ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆಯುವ ರೀತಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ತೂಗುಯ್ಯಾಲೆಯಲ್ಲಿ ಗಣೇಶ ಜೋಕಾಲಿ ಆಡುವ ರೀತಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದಾರೆ. ಗಣೇಶನ ಅಕ್ಕಪಕ್ಕದಲ್ಲಿ ಇನ್ನೂ ಎರಡು ಜೋಕಾಲಿಗಳನ್ನ ಹಾಕಲಾಗಿದ್ದು, ಈ ಜೋಕಾಲಿಗಳಲ್ಲಿ ಮಕ್ಕಳು ಕೂಡ ಉಯ್ಯಾಲೆಯನ್ನು ಆಡಿ ಖುಷಿಪಡುತ್ತಿದ್ದಾರೆ. ಸದ್ಯ ಇಡೀ ಪಟ್ಟಣದಲ್ಲಿ ಈ ಗಣೇಶ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ.