ಶಿಕ್ಷಕರ ಸ್ಥಾನ ಮಹತ್ವದ್ದು ; ವಿಧಾನ ಪರಿಷತ್ತಿನ ಶಾಸಕ ಎಂ.ಎಲ್. ಅನಿಲ್ ಕುಮಾರ್ ಮನುಷ್ಯ ಯಾವುದೇ ಹಂತದಲ್ಲಿ ಪ್ರಗತಿ ಹೊಂದಬೇಕಾದರೆ ಉತ್ತಮ ಹೆಸರು ಮಾಡಬೇಕಾದರೆ ತಂದೆ ತಾಯಿ ಮತ್ತು ಗುರುಗಳ ಬೋಧನೆ ಅತಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಕರ ಸ್ಥಾನ ಮಹತ್ವದ್ದು ಎಂದು ವಿಧಾನ ಪರಿಷತ್ತಿನ ಶಾಸಕ ಎಂ.ಎಲ್. ಅನಿಲ್ ಕುಮಾರ್ ಪ್ರತಿಪಾದಿಸಿದರು. ಕೋಲಾರ ನಗರದ ಪೇಟೆಚಾಮನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ವೇಳೆ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಶಿಕ್ಷಕ ತಾನು ಕಲಿತ ವಿದ್ಯೆಯನ್ನು ಸಂಪೂರ್ಣ ವಾಗಿ ತನ್ನ ಹಿತ